ಭತ್ತದ ಗದ್ದೆಯಲ್ಲಿ ಮೂಡಿತು ಅಪ್ಪುವಿನ ಭಾವಚಿತ್ರ; ಇಲ್ಲಿದೆ ವಿಡಿಯೋ
ಜಪಾನ್ ಮೂಲದ ಗ್ರೀನ್ ಗೋಲ್ಡನ್ ರೋಸ್, ಕಾಲಾ ಬಟ್ಟಿ ಹಾಗೂ ಸ್ಥಳೀಯ ಸೋನಾ ಮಸೂರಿ ತಳಿಯ ಭತ್ತ ನಾಟಿ ಮಾಡಿದ್ದಾರೆ. ಜುಲೈನಲ್ಲಿ ಭತ್ತದ ನಾಟಿ ಮಾಡಲಾಗಿತ್ತು. ಮಳೆಯಾಗದ ಹಿನ್ನೆಲೆಯಲ್ಲಿ ಹೆಚ್ಚಿನ ಹಣ ಖರ್ಚು ಮಾಡಿ ಟ್ಯಾಂಕರ್ ಮೂಲಕ ಗದ್ದೆಗೆ ನೀರುಣಿಸಲಾಗಿದೆ.
ಪುನೀತ್ ರಾಜ್ಕುಮಾರ್ (Puneeth Rajkumar) ಮೃತಪಟ್ಟು ಎರಡು ವರ್ಷ ಕಳೆಯುತ್ತಾ ಬಂದಿದೆ. ಪುನೀತ್ ರಾಜ್ಕುಮಾರ್ ಇಲ್ಲ ಎಂಬ ನೋವು ಎಂದಿಗೂ ಮರೆಯಾಗುವಂಥದ್ದಲ್ಲ. ಅವರನ್ನು ಹಲವು ರೀತಿಯಲ್ಲಿ ಸ್ಮರಿಸುವ ಕೆಲಸ ಆಗುತ್ತಿದೆ. ಈಗ ಭತ್ತದ ಗದ್ದೆಯಲ್ಲಿ ಪುನೀತ್ ಭಾವಚಿತ್ರ ಸಿದ್ಧಪಡಿಸಲಾಗಿದೆ. ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಡೋಣಿ ಬಸವಣ್ಣ ಕ್ಯಾಂಪ್ನಲ್ಲಿ ವಿನೂತನ ಕಾರ್ಯ ಮಾಡಲಾಗಿದೆ. ವಿಶೇಷ ಚೇತನಾಗಿರೋ ಸತ್ಯನಾರಾಯಣ ಅವರು ಭತ್ತ ನಾಟಿ ಮಾಡಿದ್ದಾರೆ. ಜಪಾನ್ ಮೂಲದ ಗ್ರೀನ್ ಗೋಲ್ಡನ್ ರೋಸ್, ಕಾಲಾ ಬಟ್ಟಿ ಹಾಗೂ ಸ್ಥಳೀಯ ಸೋನಾ ಮಸೂರಿ ತಳಿಯ ಭತ್ತ ನಾಟಿ ಮಾಡಿದ್ದಾರೆ. ಜುಲೈನಲ್ಲಿ ಭತ್ತದ ನಾಟಿ ಮಾಡಲಾಗಿತ್ತು. ಮಳೆಯಾಗದ ಹಿನ್ನೆಲೆಯಲ್ಲಿ ಹೆಚ್ಚಿನ ಹಣ ಖರ್ಚು ಮಾಡಿ ಟ್ಯಾಂಕರ್ ಮೂಲಕ ಗದ್ದೆಗೆ ನೀರುಣಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos